ಮಂಗಳೂರು: ಮಿನಿ ಲಾರಿಗೆ ಹಾಲು ಸಾಗಾಟದ ಟೆಂಪೋ ಢಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಗಾಯಗೊಂಡ ಘಟನೆ ಬುಧವಾರ ಪಡೀಲ್‌ನಲ್ಲಿ ಸಂಭವಿಸಿದೆ.
ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟೆಂಪೋ ಡಿವೈಡರ್ ಮೇಲೇರಿ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಮಿನಿ ಲಾರಿಗೆ ಢಿಕ್ಕಿ ಹೊಡೆದಿತ್ತು.
ಪರಿಣಾಮ ಟೆಂಪೋ ಚಾಲಕನಿಗೆ ಗಾಯವಾಗಿದೆ. ಅಪಘಾತದಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಪೀಕರ್ ಯು.ಟಿ. ಖಾದರ್ ಅವರು ರಕ್ಷಣ ಕಾರ್ಯ ಮತ್ತು ಸಂಚಾರ ನಿರ್ವಹಣೆಯಲ್ಲಿ ಸ್ವತಃ ಪಾಲ್ಗೊಂಡು ನೆರವಾದರು. ಗಾಯಾಳುವಿಗೆ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿಸಿದರು.