ಹದಿನೇಳು ವರ್ಷಗಳ ಸೋಲಿಲ್ಲದ ಸರದಾರ,ಅಭಿವೃದ್ಧಿಯ ಹರಿಕಾರ,ಸೌಹಾರ್ದತೆಯ ರಾಯಭಾರಿ ಸ್ಪೀಕರ್ ಯು.ಟಿ.ಖಾದರ್




 ಹದಿನೇಳು ವರ್ಷಗಳಿಂದ ಉಳ್ಳಾಲ  ಶಾಸಕರಾಗಿರುವ ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಸೋಲಿಲ್ಲದ ಸರದಾರರಾಗಿ ಮಂಗಳೂರು ಕ್ಷೇತ್ರದಲ್ಲಿ ಗುರುತಿಸಿಕೊಂಡ ರಾಜ್ಯ ಕಂಡ ಅಪರೂಪದ ಜನ ನಾಯಕರಾಗಿದ್ದಾರೆ.

ಅವರ ತಂದೆಯವರಾದ ಮರ್ಹೂಂ ಹಾಜಿ ಯು.ಟಿ. ಫರೀದ್ ಅವರೊಂದಿಗೆ ಸಣ್ಣ ಪ್ರಾಯದಲ್ಲೇ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಜನರ ಹೃದಯದರಮನೆಯ ರಾಜಕುಮಾರನಾಗಿ ಸರ್ವ ಜನ ಬಾಂಧವರ ಪ್ರೀತಿಗೆ ಪಾತ್ರರಾದ ಯು.ಟಿ.ಅಬ್ದುಲ್ ಖಾದರ್ ಎಂಬ ಪಾದರಸ ಚುರುಕಿನ ಕ್ರಿಯಾಶೀಲ ಯುವ ನಾಯಕ ತನ್ನ ತಂದೆಯವರ ವಿಯೋಗದ ನಂತರ ಉಳ್ಳಾಲ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ದಾಖಲೆಯ ವಿಜಯದೊಂದಿಗೆ ನಗುವಿನ ಹೊನಲು ಹರಿಸಿ ಇಡೀ ದೇಶವೇ ಮಂಗಳೂರು ನಗರವನ್ನು ನೋಡುವಂತೆ ಮಾಡಿದ ಅಪ್ರತಿಮ ಸಾಧಕ !



ವಿರೋಧಿಗಳ ಹದಿನೆಂಟು ತಂತ್ರಗಳನ್ನು ಕೂಡ ತನ್ನ ನಗುವಿನ ಮೂಲಕ ಹಿಮ್ಮೆಟ್ಟಿಸಿ ತಾನೊಬ್ಬ ಜನ ನಾಯಕನೇ ಹೊರತು ಕಪಟ ನಾಟಕವಾಡುವ ವ್ಯಕ್ತಿಯಲ್ಲ ಎಂದು ತನ್ನ ಸೇವೆ,ಅಭಿವೃದ್ಧಿಗಳ ಮೂಲಕ ಅವರು ತೋರಿಸಿ ಕೊಟ್ಟು ಎಲ್ಲರನ್ನೂ ಹುಬ್ಬೇರಿಸಿದ್ದಾರೆ !!!



ಪ್ರತಿಯೊಂದು ವಿಷಯಗಳಿಗೂ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಎಳೆದು ತಂದು ಅವರು ಮುಸ್ಲಿಮರ ಪರ ಇಲ್ಲ ಎಂದೆಲ್ಲಾ ಅಪಪ್ರಚಾರ ಮಾಡುವವರಿಗೆ ಈ ವರೆಗಿನ ಗೆಲುವಿನ ಮೂಲಕವೇ ಅವರು ಉತ್ತರಿಸಿದ್ದಾರೆ.
ಉಲಮಾ,ತಂಙಳ್ ಗಳ  ಹಾಗೂ ಹಿಂದೂ ಮತ್ತು ಕ್ರೈಸ್ತ ಗುರುಗಳ,ಸ್ವಾಮೀಜಿಗಳ ಆಶಿರ್ವಾದ ಇರುವ ಈ ಯುವ ಪ್ರತಿಭಾನ್ವಿತನಿಗೆ ಜಗತ್ತಿನ ಹಲವಾರು ರಾಷ್ಟ್ರ ಗಳಿಗೆ ಹೋಗಿ ಕನ್ನಡದ ಕಂಪನ್ನು ಮತ್ತು ಕೀರ್ತಿಯನ್ನು ಹರಡುವ ಸೌಭಾಗ್ಯ ಲಭಿಸಿದೆ.


ಇಡೀ ಏಷ್ಯಾ ಖಂಡದಲ್ಲೇ ಮಂಗಳೂರು ವಿಧಾನ ಸಭಾ ಕ್ಷೇತ್ರ ಜನರ ಗಮನ ಸೆಳೆಯಲು ಪ್ರಮುಖ ಕಾರಣ ನಾಲ್ಕು ಮೆಡಿಕಲ್ ಕಾಲೇಜ್ ಗಳು.
ಇದು ಯು.ಟಿ. ಖಾದರ್ ಅವರಿಗೆ ಅಭಿಮಾನದಿಂದ ತೋರಿಸಲು ಸಾಧ್ಯವಾಗುವ ಅಭಿವೃದ್ಧಿಯ ಸಂಕೇತವಾಗಿದೆ.
ಯಾರೇ ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳದೆ ತನ್ನ ಕಾಯಕದಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಮುನ್ನೇರಿದ ಈ ಕರುನಾಡಿನ ಕಾವಲುಗಾರ ಮುಂದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾಗಿ ಬರುವುದನ್ನು ಇಡೀ ದೇಶದ ಜನತೆ ಕಾತರದಿಂದ ಕಾಯುತ್ತಿದ್ದಾರೆ.
ಮಾತಿನಲ್ಲಿ ಸ್ಪಷ್ಟತೆ,ಕೃತಿಯಲ್ಲಿ ಪಾರದರ್ಶಕತೆ ಸ್ಪೀಕರ್ ಯು.ಟಿ. ಖಾದರ್ ಅವರ ವಿಶೇಷತೆಯಾಗಿದೆ.


ಮೊದಲು ನಂಬರ್ ಒನ್ ಶಾಸಕ ಬಳಿಕ ನಂಬರ್ ಒನ್ ಸಚಿವ ಇದೀಗ ದೇಶದ ನಂಬರ್ ಒನ್ ಸ್ಪೀಕರ್ !!!
ಇದಕ್ಕಿಂತ ದೊಡ್ಡ ಗೌರವ ಬೇರೇನು ಬೇಕು.
ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಚ್ಚರಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ದಿನದ ಇಪ್ಪತ್ತನಾಲ್ಕು ಗಂಟೆ ಕೂಡ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎಂಬಂಥಾ ಯೋಜನೆಯೊಂದನ್ನು ನಮ್ಮ ಪ್ರೀತಿಯ ಯು.ಟಿ.ಖಾದರ್ ಅವರು ಜಾರಿಗೆ ತಂದಿದ್ದಾರೆ.
ಯು.ಟಿ. ಖಾದರ್ ಅವರಿಗೆ ಉತ್ತರೋತ್ತರ ಯಶಸ್ಸು ಗಳನ್ನು ಹಾರೈಸುವುದರೊಂದಿಗೆ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಮತ್ತು ಪ್ರಪಂಚದ ಸೃಷ್ಟಿಕರ್ತ ಅಲ್ಲಾಹು ದೀರ್ಘಾಯುಷ್ಯ, ಆಯುರಾರೋಗ್ಯ ಕರುಣಿಸಲಿ ಎಂದು ಮನದಾಳದಿಂದ ಪ್ರಾರ್ಥಿಸುತ್ತಿದ್ದೇನೆ.

ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ
ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರು, ಸ್ಥಾಪಕಾಧ್ಯಕ್ಷರು, ಬಂಧುತ್ವ ಚಾರಿಟೇಬಲ್ ಟ್ರಸ್ಟ್