ಉಪ್ಪಿನಂಗಡಿ: ಆಧಾರ್‌ ಕೇಂದ್ರದಲ್ಲಿ ತಾರತಮ್ಯ: ಪೊಲೀಸ್‌ ದೂರು

ಉಪ್ಪಿನಂಗಡಿ: ಆಧಾರ್‌ ಕಾರ್ಡ್‌ ತಿದ್ದುಪಡಿ ಕೇಂದ್ರದಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕೆಲವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಭಾಯಿಸಿದರು.



ಇಲ್ಲಿನ ಬಿ.ಎಸ್‌.ಎನ್‌.ಎಲ್‌. ನಿಗಮದಲ್ಲಿ ಗುತ್ತಿಗೆ ಆಧಾರದಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಸಹಿತ ಇತರ ವಿಷಯಗಳಿಗೆ ಟೋಕನ್‌ ವ್ಯವಸ್ಥೆ ಮಾಡಲಾಗಿತ್ತು.


ಆದರೆ ದುಪ್ಪಟ್ಟು ಹಣ ಪಡೆದು ಕೆಲವರಿಗೆ ಟೋಕನ್‌ ನೀಡಿ ಅವರ ಕೆಲಸಗಳನ್ನು ತುರ್ತಾಗಿ ಮಾಡಲಾಗುತ್ತಿತ್ತು ಎಂದು ಆರೋಪಿಸಿ ಕೊಪ್ಪಳ ಆದಂ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ನೀಡಿ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.