ಇತ್ತು. ಕೆಲವು ದಿನಗಳ ಹಿಂದೆ 600 ರೂ. ಆಸುಪಾಸಿನಲ್ಲಿದ್ದ ಧಾರಣೆ ಹತ್ತು ದಿನದಲ್ಲಿ ಕೆ.ಜಿ.ಗೆ 50 ರೂ.ನಷ್ಟು ಹೆಚ್ಚಳ ಕಂಡಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಾಗಿದ್ದು ಹೀಗಾಗಿ ಧಾರಣೆ ಇನ್ನಷ್ಟು ಏರುವ ಸಾಧ್ಯತೆ ಕಂಡು ಬಂದಿದೆ.
ಹಸಿ ಕೊಕ್ಕೊ 215 ರೂ.
ಈಚೆಗೆ 200 ರೂ. ಗಡಿ ದಾಟಿರುವ ಹಸಿ ಕೊಕ್ಕೊ ಧಾರಣೆ ಸ್ಥಿರವಾಗಿಯೇ ಮುಂದುವರಿದಿದೆ. ಮಾ. 4ರಂದು 215 ರೂ. ದಾಖಲಾಗಿತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಒಣ ಕೊಕ್ಕೊ ಧಾರಣೆಯು ಏರಿಕೆಯಲ್ಲೇ ಸಾಗಿದೆ. ಮೂರು ತಿಂಗಳ ಹಿಂದೆ ಕೆ.ಜಿ.ಗೆ 600 ರೂ. ಇದ್ದ ಧಾರಣೆ ಪ್ರಸ್ತುತ 700 ರೂ.ಗೆ ತಲುಪಿದೆ.
ಅಡಿಕೆ ಧಾರಣೆ ಸ್ಥಿರ
ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 380 ರೂ., ಸಿಂಗಲ್ ಚೋಲ್ 455 ರೂ., ಡಬ್ಬಲ್ ಚೋಲ್ 495 ರೂ. ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ, ಸಿಂಗಲ್ ಚೋಲ್, ಡಬ್ಬಲ್ ಚೋಲ್ ಧಾರಣೆ ಕ್ಯಾಂಪ್ಕೋ ಧಾರಣೆಗೆ ಹೋಲಿಸಿದರೆ ಕೆ.ಜಿ.ಗೆ 5 ರೂ.ನಷ್ಟು ಹೆಚ್ಚಳ ಇತ್ತು. ರಬ್ಬರ್ ಗ್ರೇಡ್‌ಗೆ 189 ರೂ., ರಬ್ಬರ್ ಸಾðéಪ್ 124.5 ರೂ. ಇತ್ತು. ತೆಂಗಿನ ಕಾಯಿ ಧಾರಣೆ ಕೆ.ಜಿ.ಗೆ 54 ರೂ. ಇತ್ತು.