Electricity Bill;ಯುನಿಟ್‌ ದರದಲ್ಲಿ ಇಳಿಕೆ, ಮಾಸಿಕ ಶುಲ್ಕ ಏರಿಕೆ!


ಮಂಗಳೂರು: ಒಂದು ಕಡೆ ಹಾಲಿನ ದರ ಏರಿಕೆಗೆ ಸರಕಾರ ಅನುಮೋದನೆ ನೀಡಿ ದ ದಿನವೇ ಇನ್ನೊಂದೆಡೆ ರಾಜ್ಯದ ಜನರಿಗೆ ವಿದ್ಯುತ್‌ ದರ ಏರಿಕೆ ಆಘಾತ ನೀಡ ಲಾ ಗಿ ದೆ. ಗೃಹ ಬಳಕೆದಾರರಿಗೆ ನಿಗದಿತ ಶುಲ್ಕವನ್ನು ಮಾಸಿಕ 25 ರೂ. ಹೆಚ್ಚಳ ಮಾಡಲಾಗಿದೆ.



ಈ ಮಧ್ಯೆ ಪಿಂಚಣಿ ಹೊರೆಯನ್ನು ಕೂಡ ಪಾವತಿಸಬೇಕಿರುವುದರಿಂದ ಸಹಜವಾಗಿ ವಿದ್ಯುತ್‌ ಗ್ರಾಹಕರಿಗೆ ಎರಡು ಬರೆ ಎಳೆದಂತಾಗಿದೆ.

ಇದೇ ಮೊದಲ ಬಾರಿಗೆ ಮುಂದಿನ 3 ವರ್ಷಗಳಿಗೆ ಅನ್ವಯ ಆಗು ವಂತೆ ಗುರು ವಾರ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಪರಿಷ್ಕೃತ ದರ ಪ್ರಕಟಿಸಿದೆ. ಅದರಂತೆ ಎಲ್ಲ ಪ್ರಕಾರಗಳ ಗ್ರಾಹಕರಿಗೂ ನಿಗದಿತ ಶುಲ್ಕ ಹೆಚ್ಚಳದ ಬರೆ ಹಾಕಲಾಗಿದೆ. ಇನ್ನು ವಿದ್ಯುತ್‌ ದರ ಹೆಚ್ಚಳ ಮಾಡಿಲ್ಲ, ಬದಲಿಗೆ ಕಡಿಮೆ ಮಾಡಲಾಗಿದೆ. ಆದರೂ ಕೆಪಿಟಿಸಿಎಲ್‌ ನೌಕರರ ಪಿಂಚಣಿ ಮತ್ತು ಗ್ರ್ಯಾಚುಯಿಟಿ ಹಿಂಬಾಕಿಯನ್ನು ಪ್ರತೀ ಯುನಿಟ್‌ಗೆ
36 ಪೈಸೆಯಂತೆ ವಸೂಲಿಗೆ ಇದೇ ತಿಂಗಳ 19ರಂದು ಆದೇಶಿಸಿದ್ದರಿಂದ ದರವೂ ಹೆಚ್ಚಾಗಿದೆ. ಎ. 1ರಿಂದ ಪರಿಷ್ಕೃತ ದರ ಅನ್ವಯಿಸಲಿದೆ.

ಗೃಹ ಬಳಕೆದಾರರ ಪ್ರಸ್ತುತ ನಿಗದಿತ ಶುಲ್ಕ 120 ರೂ. ಇದ್ದು, ವಿದ್ಯುತ್‌ ಬಳಕೆ ಶುಲ್ಕ ಪ್ರತೀ ಯುನಿಟ್‌ಗೆ 5.90 ರೂ.

ದರ ಏರಿಕೆ ಲೆಕ್ಕಾಚಾರ?
3 ಕಿ.ವ್ಯಾ. ಸ್ಥಾಪಿತ ಸಾಮರ್ಥ್ಯ ಹೊಂದಿರುವ ಒಬ್ಬ ಗ್ರಾಹಕ ಮಾಸಿಕ 100 ಯುನಿಟ್‌ ಬಳಸುತ್ತಿದ್ದರೆ, ಅವರಿಗೆ ಮಾಸಿಕ ಪ್ರತಿ ಕಿ.ವ್ಯಾ.ಗೆ 120 ರೂ.ಗಳಂತೆ 360 ರೂ. ಹಾಗೂ ಪ್ರತೀ ಯುನಿಟ್‌ಗೆ 5.90 ರೂ.ಗಳಂತೆ 100 ಯುನಿಟ್‌ 590 ರೂ. ಮತ್ತು ಇಂಧನ ಹೊಂದಾಣಿಕೆ ಶುಲ್ಕ 0.22ರಂತೆ 100 ಯುನಿಟ್‌ಗೆ26 ರೂ. ಸೇರಿ ಒಟ್ಟು 876 ರೂ. ಬರುತ್ತಿದೆ. ಆದರೆ ಪರಿಷ್ಕೃತ ದರದಂತೆ ಪ್ರತೀ ಕಿ.ವ್ಯಾ.ಗೆ 145 ರೂ.ಗಳಂತೆ 3 ಕಿ.ವ್ಯಾ.ಗೆ 435 ರೂ. ಆಗುತ್ತದೆ. ಇದಕ್ಕೆ ಪ್ರತೀ ಯುನಿಟ್‌ಗೆ 6.16 ರೂ.ಗಳಂತೆ 100 ಯುನಿಟ್‌ಗೆ 616 ರೂ. ಆಗುತ್ತದೆ. ಜತೆಗೆ ಇಂಧನ ಹೊಂದಾಣಿಕೆ ಶುಲ್ಕ 0.22ರಂತೆ ಲೆಕ್ಕಹಾಕಿದರೆ 100 ಯುನಿಟ್‌ಗೆ 26 ರೂ. ಆಗುತ್ತದೆ. ಇದರಿಂದ ಒಟ್ಟಾರೆಯಾಗಿ ಮಾಸಿಕ 1,077 ರೂ. ಆಗುತ್ತದೆ.

ಇದೆ. ಬರುವ ತಿಂಗಳಿಂದ ಕ್ರಮವಾಗಿ ನಿಗದಿತ ಶುಲ್ಕ 145 ರೂ. ಹಾಗೂ ವಿದ್ಯುತ್‌ ಬಳಕೆ ಶುಲ್ಕ ಪ್ರತೀ ಯುನಿಟ್‌ಗೆ 6.16 ರೂ. ಆಗಲಿದೆ. “ಗೃಹ ಜ್ಯೋತಿ’ ಯೋಜನೆ ಅಡಿ 200 ಯುನಿಟ್‌ವರೆಗೆ ಸರಕಾರವೇ ಭರಿಸುವುದರಿಂದ ಈ ಹೊರೆ ಸದ್ಯಕ್ಕೆ ಸರಕಾರದ ಮೇಲೆಯೇ ಬೀಳಲಿದೆ.

200 ಯುನಿಟ್‌ ಮೇಲೆ ಬಳಸುವವರಿಗೆ ಹೊರೆ
200 ಯುನಿಟ್‌ಗಿಂತ ಹೆಚ್ಚು ಬಳಸುವ ಗ್ರಾಹಕರ ಮೇಲೆ ಹೆಚ್ಚಿನ ಹೊರೆಬೀಳಲಿದೆ. ಇದೇ ಮೊದಲ ಬಾರಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚಿನ ಹೊರೆ ಹಾಕಿಲ್ಲ. ಆದರೆ ಅವರು ಪಿಂಚಿಣಿ ಹೊರೆಯನ್ನು ಭರಿಸಲೇಬೇಕು. ಸಾಮಾನ್ಯ ವಾಗಿ ಈ ಹಿಂದೆ ನಿಗದಿತ ಶುಲ್ಕವನ್ನು ಹೆಚ್ಚಿಸುತ್ತಿರಲಿಲ್ಲ. ಈಚೆಗೆ ವಿದ್ಯುತ್‌ ಬಳಕೆ ಶುಲ್ಕ ಕಡಿಮೆ ಮಾಡಿ ನಿಗದಿತ ಶುಲ್ಕ ಹೆಚ್ಚಿಸುವ “ಟ್ರೆಂಡ್‌’ ಆರಂಭವಾಗಿದೆ. ಇದರಿಂದ ಗ್ರಾಹಕರು ವಿದ್ಯುತ್‌ ಬಳಸಲಿ ಅಥವಾ ಬಳಸದಿರಲಿ; ಪ್ರತೀತಿ ತಿಂಗಳು ನಿಗದಿತ ಶುಲ್ಕ ಭರಿಸಲೇ ಬೇಕಾಗುತ್ತದೆ. ಆಗ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳಿಗೆ ಒಂದು ರೀತಿ ನಿಶ್ಚಿತ ಆದಾಯ ಎಂಬ ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗಿದೆ.

ಗೃಹ ಬಳಕೆ ನಿಗದಿತ ಶುಲ್ಕ
ಪ್ರಸ್ತುತ 50 ಕಿ.ವ್ಯಾ.ವರೆಗೆ 120 ರೂ. ಪರಿಷ್ಕೃತ- 145 ರೂ.
ವಿದ್ಯುತ್‌ ಬಳಕೆ ದರ (ಪ್ರತೀ ಯುನಿಟ್‌ಗೆ)ಪ್ರಸ್ತುತ 5.90 ರೂ.
ಪರಿಷ್ಕೃತ ದರ 5.80 ರೂ.
ಗೃಹ ಬಳಕೆದಾರರಿಗೆ ಮೊದಲ 50 ಯುನಿಟ್‌ ಪ್ರತ್ಯೇಕ ದರ ಇತ್ತು. ಅದು ಈಗ ಇಲ್ಲ.
ಗೃಹ ಬಳಕೆದಾರರ ಮೇಲೆ ಒಟ್ಟು ಹೊರೆ ಪ್ರತೀ ಯುನಿಟ್‌ಗೆ 5.80 ರೂ. ಮತ್ತು ಪಿಂಚಿಣಿ ಹೊರೆ 36 ಪೈಸೆ ಸೇರಿ
6.16 ರೂ. ಬೀಳಲಿದೆ.

ಕೈಗಾರಿಕೆ (ಎಚ್‌ಟಿ 2ಎ)
ಡಿಮ್ಯಾಂಡ್‌ ಶುಲ್ಕ
ಪ್ರಸ್ತುತ ಪ್ರತಿ ಎಚ್‌ಪಿಗೆ 340 ರೂ.
ಪರಿಷ್ಕೃತ ದರ ಪ್ರತಿ ಎಚ್‌ಪಿಗೆ 345 ರೂ.
ವಿದ್ಯುತ್‌ ಶುಲ್ಕ (ಪ್ರತಿ ಯುನಿಟ್‌ಗೆ)
ಪ್ರಸ್ತುತ ದರ 6.90 ರೂ.
ಪರಿಷ್ಕೃತ ದರ 6.60 ರೂ. (36 ಪೈಸೆ ಸೇರಿದರೆ 6.96 ರೂ.)

ಸಣ್ಣ ಕೈಗಾರಿಕೆ (ಎಲ್ಟಿ 5)
ನಿಗದಿತ ಶುಲ್ಕ
ಪ್ರಸ್ತುತ ದರ ಪ್ರತೀ ಎಚ್‌ಪಿ (100 ಎಚ್‌ಪಿವರೆಗೆ) 140 ರೂ.
ಪರಿಷ್ಕೃತ ದರ ಪ್ರತೀ ಎಚ್‌ಪಿಗೆ 150 ರೂ.
ವಿದ್ಯುತ್‌ ಶುಲ್ಕ (ಪ್ರತೀ ಯುನಿಟ್‌ಗೆ)
ಪ್ರಸ್ತುತ ದರ 6.10 ರೂ.
ಪರಿಷ್ಕೃತ ದರ 4.50 ರೂ. (36 ಪೈಸೆ ಸೇರಿದರೆ 4.86 ರೂ.)

ವಾಣಿಜ್ಯ (ಎಲ್‌ಟಿ 3ಎ)
ನಿಗದಿತ ಶುಲ್ಕ
ಪ್ರಸ್ತುತ 50 ಕಿ.ವ್ಯಾ.ವರೆಗೆ 210 ರೂ.
ಪರಿಷ್ಕೃತ ದರ 215 ರೂ.
ವಿದ್ಯುತ್‌ ಬಳಕೆ ಶುಲ್ಕ
(ಪ್ರತೀ ಯುನಿಟ್‌ಗೆ)
ಪ್ರಸ್ತುತ ದರ ಪ್ರತೀ ಯುನಿಟ್‌ಗೆ 8 ರೂ.
ಪರಿಷ್ಕೃತ ದರ 7 ರೂ.
(36 ಪೈಸೆ ಸೇರಿದರೆ 7.36 ರೂ.)