ಪರಿಣಾಮ ತಂಡವನ್ನು ಉತ್ತಮ ಸ್ಥಿತಿಯಲ್ಲಿ ತಂದು ನಿಲ್ಲಿಸಿದರು.
ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ 18.4 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಶುಭಮನ್ ಗಿಲ್ 50 ಎಸೆತಗಳಲ್ಲಿ ಕೇವಲ ಒಂದು ಸಿಕ್ಸರ್ ಸಹಾಯದಿಂದ 31 ರನ್ ಸಿಡಿಸಿದರು. ಇವರು ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಗ್ಲೇನ್ ಫಿಲಿಪ್ಸ್ ಹಿಡಿದ ಮನಮೋಹಕ ಕ್ಯಾಚ್‌ಗೆ ಬಲಿಯಾದರು.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 1 ರನ್‌ಗೆ ಔಟ್ ಆದರು. ಇಲ್ಲಿಯವರೆಗೂ ಮನಮೋಹಕ ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ಶರ್ಮಾ 83 ಎಸೆತದಲ್ಲಿ ಸಂಯಮ ಕಳೆದುಕೊಂಡರು. ಇವರು ರಚಿನ್ ರವೀಂದ್ರ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆದರು. ಇವರು 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿದರು. 122 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು.
ಟೀಮ್ ಇಂಡಿಯಾದ ಪರ ನಾಲ್ಕನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಜೋಡಿ 75 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು. ಶ್ರೇಯಸ್ ಅಯ್ಯರ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 48 ರನ್ ಬಾರಿಸಿ ಇಲ್ಲದ ರನ್ ಬಾರಿಸಲು ಹೋಗಿ ಔಟ್ ಆದರು. ಅಕ್ಷರ್ ಪಟೇಲ್ 29 ರನ್ ಸಿಡಿಸಿ ಔಟ್ ಆದರು. ಹಾರ್ದಿಕ್ ಪಾಂಡ್ಯ ದೊಡ್ಡ ಇನಿಂಗ್ಸ್ ಕಟ್ಟದೇ ಇದ್ದರೂ ತಂಡದ ಗೆಲುವಿನಲ್ಲಿ ಮಿಂಚಿದರು.
ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದ ಕಿವೀಸ್
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಉತ್ತಮವಾಗಿತ್ತು. ಕಿವೀಸ್ ತಂಡದ ಪರ ವಿಲ್ ಯಂಗ್ (15) ಹಾಗೂ ರಚಿನ್ ರವೀಂದ್ರ (37) ಜೋಡಿ ಮೊದಲ ವಿಕೆಟ್‌ಗೆ 57 ರನ್ ಸೇರಿಸಿತು. ಉಳಿದಂತೆ ಡೇರಿಲ್ ಮಿಚೆಲ್ 3 ಬೌಂಡರಿ ನೆರವಿನಿಂದ 63 ರನ್ ಸಿಡಿಸಿದರೆ, ಮಿಚೆಲ್ ಬ್ರಾಸ್‌ವೆಲ್ 3 ಬೌಂಡರಿ, 2 ಸಿಕ್ಸರ್ ಅಜೇಯ 53 ರನ್ ಸಿಡಿಸಿದರು. ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.