ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಜುಬೇದ ಅವಿರೋಧ ಆಯ್ಕೆ

ನರಸಿಂಹರಾಜಪುರ, ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸದಸ್ಯೆ ಜುಬೇದ ಅವಿರೋದ‍ವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯಿತಿ ಹಿಂದಿನ ಅಧ್ಯಕ್ಷೆ ಸುರೈಯಾಭಾನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕಾಗಿ ಮಂಗಳವಾರ ಚುನಾವಣೆ ನಡೆಯಿತು. ಪಪಂ ಸದಸ್ಯೆ ಜುಬೇದ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ನಿಗದಿತ ಸಮಯ ಮುಗಿದರೂ ಬೇರೆ ಯಾರೂ ನಾಮಪತ್ರ ಸಲ್ಲಿಸಿದೆ ಇರುವುದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಜುಬೇದ ಅವರ ಪಟ್ಟಣ ಪಂಚಾಯಿತಿಗೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.


ಹಿಂದಿನ ಅಧ್ಯಕ್ಷೆ ಸುರೈಯಾಭಾನು ತಮ್ಮ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾದ ಸ್ಥಾನ

ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸದಸ್ಯೆ ಜುಬೇದ ಅವಿರೋದ‍ವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯಿತಿ ಹಿಂದಿನ ಅಧ್ಯಕ್ಷೆ ಸುರೈಯಾಭಾನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕಾಗಿ ಮಂಗಳವಾರ ಚುನಾವಣೆ ನಡೆಯಿತು. 







ಪಪಂ ಸದಸ್ಯೆ ಜುಬೇದ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ನಿಗದಿತ ಸಮಯ ಮುಗಿದರೂ ಬೇರೆ ಯಾರೂ ನಾಮಪತ್ರ ಸಲ್ಲಿಸಿದೆ ಇರುವುದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಜುಬೇದ ಅವರ ಪಟ್ಟಣ ಪಂಚಾಯಿತಿಗೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್‌. ವಿ.ಮಂಜುನಾಥ್, ಚುನಾವಣಾ ಶಿರಸ್ತಾರ್ ವೇಣುಗೋಪಾಲ್ ಇದ್ದರು.









ಅಭಿನಂದನಾ ಕಾರ್ಯಕ್ರಮದಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ನೂತನ ಅಧ್ಯಕ್ಷೆ 2 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯತಿ ಇತಿಹಾಸದಲ್ಲೇ ಕಾಂಗ್ರೆಸ್‌ ಪಕ್ಷದ 9 ಸದಸ್ಯರು ಆಯ್ಕೆಯಾಗಿದ್ದಾರೆ. ಮುಂದಿನ 7 ತಿಂಗಳ ಅವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರ ಪಡೆದು ಉತ್ತಮ ಆಡಳಿತ ನಡೆಸಲಿ. ಮೊದಲ 1.50 ವರ್ಷದ ಅವಧಿಯಲ್ಲಿ ಕೋವಿಡ್‌ ಬಂದಿದ್ದು ಅಭಿವೃದ್ಧಿಯಲ್ಲಿ ಹಿನ್ನೆಡೆಯಾಯಿತು. ಪ್ರಸ್ತುತ ಶವ ಸಂಸ್ಕಾರಕ್ಕೆ ನೀಡುತ್ತಿದ್ದ 2 ಸಾವಿರ ವನ್ನು 3 ಸಾವಿರಕ್ಕೆ ಹೆಚ್ಚಿಸಲಾಗಿದೆ. 



ಸಣ್ಣ,ಪುಟ್ಟ ಕಾಮಗಾರಿಯನ್ನು ಪಟ್ಟಣ ಪಂಚಾಯಿತಿ ಸಂಪನ್ಮೂಲದಲ್ಲೇ ಖರ್ಚು ಮಾಡಬೇಕಾಗಿದೆ. ಕಳೆದ 20 ವರ್ಷದಿಂದಲೂ ನಿವೇಶನ ನೀಡಲು ಸಾದ್ಯವಾಗಿರಲಿಲ್ಲ. ಈಗ 158 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಪಪಂ ಸದಸ್ಯ ಮುಕಂದ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಕಿಟ್ ನೀಡಿದ್ದೇವೆ. ನರಸಿಂಹರಾಜಪುರ ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲು ₹25 ಲಕ್ಷ ಯಂತ್ರ ಬಂದಿದ್ದು ಇಂದು ಎಲ್ಲಾ ಸದಸ್ಯರು ವೀಕ್ಷಿಸಿದ್ದೇವೆ ಎಂದರು.

ನೂತನ ಅಧ್ಯಕ್ಷೆ ಜುಬೇದ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸುತ್ತೇನೆ. ಪಟ್ಟಣದಲ್ಲಿ ಫಲಾನುಭವಿಗಳಿಗೆ ಆಶ್ರಯ ನಿವೇಶನ, ಹಕ್ಕು ಪತ್ರ ನೀಡುವುದು ಸವಾಲಿನ ಕೆಲಸವಾಗಿದೆ.158 ನಿವೇಶನ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಟೆಂಡರ್‌ ಕರೆಯಲಾಗಿದೆ. ನಗರೋತ್ತಾನದ ಅನುದಾನ ₹2 ಕೋಟಿ ಬಿಡುಗಡೆಯಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ, ಸದಸ್ಯರಾದ ಸುರೈಯಾಭಾನು, ಸೋಜ,ಮುನಾವರ್‌ ಪಾಷಾ, ಕುಮಾರ ಸ್ವಾಮಿ,ಕಾಂಗ್ರೆಸ್‌ ಪಕ್ಷದ ನಗರ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್‌, ಮುಖಂಡ ಎಸ್‌.ಡಿ.ರಾಜೇಂದ್ರ ಇದ್ದರು.


ಶಾಸಕರ ಅಭಿನಂದನೆ:

ಶಾಸಕ ಟಿ.ಡಿ.ರಾಜೇಗೌಡ ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ನೂತನ ಅಧ್ಯಕ್ಷೆ ಜುಬೇದರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಪಿ.ಆರ್‌. ಸದಾಶಿವ, ಸಾಜು, ಇ.ಸಿ.ಜೋಯಿ, ಎಂ.ಆರ್‌.ರವಿಶಂಕರ್ ಮತ್ತಿತರರು ಇದ್ದರು.