ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ ಅಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 1.30ರ ಬಳಿಕ ಜಾಲತಾಣದಲ್ಲಿ ಫಲಿತಾಂಶ ಲಭ್ಯವಿದೆ. karresults.nic.in ಅಥವಾ kseab.karnataka.gov.in ವೆಬ್ ಸೈಟ್ ಅಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮಾರ್ಚ್ 1 ರಿಂದ ಮಾರ್ಚ್ 20 ರ ವರೆಗೆ ಸೆಕೆಂಡ್ ಪಿಯು ಪರೀಕ್ಷೆ ನಡೆದಿತ್ತು. 7 ಲಕ್ಷದ 13 ಸಾವಿರದ 862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ ಉಡುಪಿ (93.90%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ (93.57%) ದ್ವಿತೀಯ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣ ತೃತೀಯ ಸ್ಥಾನ ಪಡೆದಿದೆ. ಯಾದಗಿರಿ ಈ ವರ್ಷವೂ ಕೊನೆಯ ಸ್ಥಾನ (48.45%) ಪಡೆದಿದೆ.
ಕಲಾ ವಿಭಾಗದಲ್ಲಿ ಸಂಜನಾಬಾಯಿ ರಾಜ್ಯಕ್ಕೆ ಪ್ರಥಮ, 597 ಅಂಕ ಪಡೆದಿದ್ದಾರೆ. ಬಳ್ಳಾರಿ ನಿರ್ಮಾಲಾ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕೆನರಾ ಕಾಲೇಜು ಮಂಗಳೂರಿನ ದೀಪಶ್ರೀ ರಾಜ್ಯಕ್ಕೆ ಪ್ರಥಮ, 599 ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎಕ್ಸಫರ್ಟ್ ಕಾಲೇಜು ಮಂಗಳೂರಿನ ಅಮೂಲ್ಯ ಕಾಮತ್ ರಾಜ್ಯಕ್ಕೆ ಪ್ರಥಮ 599 ಅಂಕ ಪಡೆದಿದ್ದಾರೆ.