ಮಂಗಳೂರು : ವಿದ್ಯಾರ್ಥಿಗಳೇ ಹಾಗೂ ಪೋಷಕರೇ 2024-25ನೇ ಸಾಲಿನ ಫಲಿತಾಂಶ ಇಂದು ಏಪ್ರಿಲ್ 8ರ ಮಂಗಳವಾರದಂದು ಬಿಡುಗಡೆಯಾಗಲಿದೆ. ಮಾರ್ಚ್ 1ರಿಂದ ಮಾರ್ಚ್ 20 ರ ವರೆಗೆ ನಡೆದಿದ್ದ ಸೆಕೆಂಡ್ ಪಿಯು ಪರೀಕ್ಷೆ ಫಲಿತಾಂಶವನ್ನು ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಲಾಗುತ್ತದೆ.
ಬಹುನಿರೀಕ್ಷಿತ 2025 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್ ಪ್ರಕಟಕ್ಕೆ ಕ್ಷಣಗಣನೆ ಶುರುವಾಗಿದ್ದು, ಇವತ್ತು ಮಧ್ಯಾಹ್ನ 1.30 ಕ್ಕೆ ವೆಬ್ಸೈಟ್ ನಲ್ಲಿ ರಿಸಲ್ಟ್ ಪ್ರಕಟಗೊಳ್ಳಲಿದೆ.
2025ರ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದ ಈ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಇವರಲ್ಲಿ 3,35,468 ಯುವಕರು , 3,78,389 ಯುವತಿಯರು ಮತ್ತು ಐವರು ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳು ಸೇರಿದ್ದಾರೆ.
ಫಲಿತಾಂಶ ವೀಕ್ಷಣೆ ಹೇಗೆ..?
* ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.inಗೆ ಭೇಟಿ ನೀಡಬೇಕು.
* ಹೋಂ ಪೇಜ್ನಲ್ಲಿ Second PU Results 2025 ಲಿಂಕ್ ಕ್ಲಿಕ್ ಮಾಡಬೇಕು.
* ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಬೇಕು.
* Second PU Results 2025 ಎಂಬುದು ಸ್ಕ್ರೀನ್ನಲ್ಲಿ ಕಾಣಿಸುತ್ತದೆ. ಬಳಿಕ ಫಲಿತಾಂಶ ವೀಕ್ಷಣೆ ಮಾಡಬಹುದು.
* ಫಲಿತಾಂಶದ ಪ್ರತಿಯನ್ನು ಪಿಡಿಎಫ್ ಡೌನ್ಲೋಡ್ ಗೂ ಅವಕಾಶ ಕಲ್ಪಿಸಲಾಗಿದೆ.