ಏಳಿ ಎದ್ದೇಳಿ ಯುವ ಜನಾಂಗವೇ, ಏಳಿ ಎಚ್ಚೆತ್ತುಕೊಳ್ಳಿ ✍️ ಸಿಂಸಾರುಲ್ ಹಕ್ ಆರ್ಲಪದವು

 


ಏಳಿ ಎದ್ದೇಳಿ ಯುವ ಜನಾಂಗವೇ, ಏಳಿ ಎಚ್ಚೆತ್ತುಕೊಳ್ಳಿ..

ಏಳಿ ಎದ್ದೇಳಿ ಯುವ ಜನಾಂಗವೇ ಏಳಿ ಎಚ್ಚೆತ್ತುಕೊಳ್ಳಿ 
ಇಲ್ಲಿ ನಡೆಯುವ ಅನಾಚಾರದ ವಿರುದ್ಧ ಹೋರಾಡೋಣ ಬನ್ನಿ..

ಜಾತಿ-ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ;
 ರಾಜಕೀಯ ಸ್ವಾರ್ಥಕ್ಕಾಗಿ ಗಲಭೆ ಸೃಷ್ಟಿ ಮಾಡುವವರ ವಿರುದ್ಧ;
 ಏಳಿ ಯುವ ಜನಾಂಗವೇ ಎಚ್ಚೆತ್ತುಕೊಳ್ಳೋಣ..

ಶೋಷಣೆ ಮಾಡುವವರನ್ನು ವಿರೋಧಿಸಿ ಹೊತ್ತುತ್ತಿರುವ ಕೋಮ ಜ್ವಾಲೆಗೆ ಸೌಹಾರ್ದತೆ ಎಂಬ ನೀರೆರಚಿ 
ಮಾನವೀಯತೆಗಾಗಿ ದುಡಿಯೋಣ ಎಲ್ಲರೂ ಒಟ್ಟಾಗಿ ಶಾಂತಿ ಸಮಾಧಾನವ ಮೆರೆಸೋಣ..

ಬಡವ ಶ್ರೀಮಂತರೆಂಬ ಕೀಳು ಮೇಲನ್ನು ನಿಲ್ಲಿಸೋಣ.
 ಎಲ್ಲರೂ ಸಮಾನರು ಎಂದು ಸಾರೋಣ ದುಷ್ಟಶಕ್ತಿಗಳ ಹುಚ್ಚು ಅಡಗಿಸೋಣ 
ಏಳಿ ಎದ್ದೇಳಿ ಯುವ ಜನಾಂಗವೇ ಎಚ್ಚೆತ್ತುಕೊಳ್ಳಿ..

ಸ್ವಾತಂತ್ರ್ಯದ ಪವಿತ್ರ ಸಂವಿಧಾನ ನಮ್ಮದು 
ಭವ್ಯ ಸಂವಿಧಾನವ ಸೃಷ್ಟಿಸಿದರು ಅಂಬೇಡ್ಕರರು
 ತ್ರಿವರ್ಣ ಧ್ವಜವು ಸಾರುವ ನೀತಿಯ ಎಲ್ಲೆಡೆ ಪಸರಿಸೋಣ 
ಒಗ್ಗಟ್ಟಾಗಿ ಸೌಹಾರ್ದತೆಯ ಭಾರತವನ್ನು ಕಟ್ಟೋಣ
ಯುವ ಜನಾಂಗವೇ ಎದ್ದೇಳಿ...

(ವಿದ್ಯಾರ್ಥಿ ಸಂತ ಫಿಲೋಮಿನಾ ಕಾಲೇಜು ಪುತ್ತೂರು)